ತ್ಯಾಗರಾಜ ಮಂಗಳಂ ಕರ್ನಾಟಕ ಸಂಗೀತದಲ್ಲಿ ಒಂದು ರಾಗವಾಗಿದೆ (ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದ ಸಂಗೀತ ಪ್ರಕಾರ) ಈ ರಾಗವು ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸೃ‍‌ಷ್ಟಿಸಿರುವ ರಾಗವಾಗಿದ್ದು ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ 72 ಮೇಳಕರ್ತ ರಾಗ ಪದ್ದತಿಯ 23 ನೇ ಮೇಳಕರ್ತ ರಾಗ ಗೌರಿ ಮನೋಹರಿಯ ಜನ್ಯ ರಾಗವಾಗಿದೆ. ಈರಾಗಕ್ಕೆ ಹಿಂದೂಸ್ತಾನಿ ಸಂಗೀತದಲ್ಲಿ ಸಮಾನವಾದ ರಾಗವಿಲ್ಲ. ತ್ಯಾಗರಾಜ ಮಂಗಳಂ ಒಂದು ಔಡವ-ಸಂಪೂರ್ಣ ರಾಗವಾಗಿದ್ದು (ಅಥವಾ ಓಡವ ರಾಗಂ, ಅಂದರೆ ಪೆಂಟಾಟೋನಿಕ್ ಆರೋಹಣ ಪ್ರಮಾಣ) ಇದರ ಆರೋಹಣ ಮತ್ತು ಅವರೋಹಣ ಪ್ರಮಾಣ ಈ ಕೆಳಗಿನಂತಿರುತ್ತದೆ. ಆರೋಹಣ: ಸ ಗ₂ ಮ₁ ಪ ನಿ₃ ಸ ಅವರೋಹಣ: ಸ ನಿ₃ ದ₂ ಪ ಮ₁ ಗ₂ ರಿ₂ ಸ ಈ ರಾಗದಲ್ಲಿ ಷಡ್ಜಂ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಪಂಚಮ ಮತ್ತು ಕಾಕಲಿ ನಿಷಾದ ಆರೋಹಣದಲ್ಲಿ ಮತ್ತು ಚತುಶ್ರುತಿ ಋಷಭ ಮತ್ತು ಚತುಶ್ರುತಿ ದೈವತ ಸ್ವರಗಳನ್ನು ಅವರೋಹಣದಲ್ಲಿ ಬಳಸಲಾಗುತ್ತದೆ. ಇದು ಔಡವ - ಸಂಪೂರ್ಣ ರಾಗವಾಗಿದೆ == ಸಂಯೋಜನೆಗಳು == ಈ ರಾಗದಲ್ಲಿ ಸಂಯೋಜನೆ ಧ್ಯಾನ ಮೂಲಂ - ವಿರುತ್ತಂ ಗಾಯಕರು: ಪ್ರಿಯದರ್ಶಿನಿ == ಟಿಪ್ಪಣಿಗಳು == == ಉಲ್ಲೇಖಗಳು ==